ಶಿಕ್ಷಕ ವೃತ್ತಿಯ ಘನತೆ ವಿಶ್ವವ್ಯಾಪಕ' ನಿವೃತ್ತ ಶಿಕ್ಷಕ ಸಿ.ಎಂ. ಕಿತ್ತೂರ ಅಭಿನಂದನಾ ಸಮಾರಂಭ

ಲೋಕದರ್ಶನವರದಿ

ಧಾರವಾಡ,02 : ಅಕ್ಷರ ಸಂಸ್ಕೃತಿಯ ಪವಿತ್ರ ಪರಂಪರೆಯನ್ನು ನಿರಂತರ ಮುಂದುವರೆಸುವಲ್ಲಿ ಮಹತ್ವದ ಪಾತ್ರ ಹೊಂದಿರುವ ಶಿಕ್ಷಕರ ವೃತ್ತಿಯ ಘನತೆ ವಿಶ್ವವ್ಯಾಪಕವಾಗಿದೆ ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಹೇಳಿದರು.

ಇಲ್ಲಿಯ ಶಿಕ್ಷಕರ ಭವನದಲ್ಲಿ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ತಾಲೂಕಿನ ಸಿ.ಎಂ. ಕಿತ್ತೂರ ಅಭಿಮಾನಿ ಬಳಗದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಗಸನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಸಿ.ಎಂ. ಕಿತ್ತೂರ ಅವರ ಅಭಿನಂದನಾ ಸಮಾರಂಭದ ಭಾಗವಹಿಸಿ ಮಾತನಾಡುತ್ತಿದ್ದರು. ಕಿತ್ತೂರ ಅವರು ತಮ್ಮ ಶಿಕ್ಷಕ ವೃತ್ತಿಯ ಜೊತೆಗೆ ಶಿಕ್ಷಕರ ನೋವು ನಲಿವುಗಳಿಗೆ ಸ್ಪಂದಿಸಿರುವುದು ವಿಶೇಷವಾಗಿದೆ. ಇದನ್ನು ಇಂದಿನ ಸಮಾರಂಭವೇ ಸಾಕ್ಷೀಕರಿಸುತ್ತದೆ ಎಂದೂ ಅವರು ಹೇಳಿದರು.

 ಮಾಜಿ ಶಾಸಕಿ ಸೀಮಾ ಮಸೂತಿ ಸಮಾರಂಭ ಉದ್ಘಾಟಿಸಿದರು. ಮಾಜಿ ಶಾಸಕ ಎ. ಬಿ. ದೇಸಾಯಿ ಅಧ್ಯಕ್ಷತೆವಹಿಸಿದ್ದರು. ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ, ತಾ. ಪಂ. ಅಧ್ಯಕ್ಷ ಈರಣ್ಣ ಏಣಗಿ, ಜಿ.ಪಂ. ಮಾಜಿ ಉಪಾಧ್ಯಕ್ಷ ನಿಜನಗೌಡ ಪಾಟೀಲ. ಸಹಕಾರಿ ಧುರೀಣ ಗುರುರಾಜ ಹುಣಸಿಮರದ, ಉಪನರ್ಿದೇಶಕ ಆರ್. ಎಸ್. ಮುಳ್ಳೂರ, ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ, ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ, ಗಿರೀಶ ಪದಕಿ, ಡಾ: ರೇಣುಕಾ ಅಮಲಝರಿ, ಕ್ಷೇತ್ರ ಸಮ್ವಯಾಧಿಕಾರಿ ದಫೇದಾರ, ಇಂಜನೀಯರ್ ವಿಜಯೇಂದ್ರ ಪಾಟೀಲ, ಎಸ್. ಟಿ. ಅರಸನಾಳ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ, ಎಸ್. ಎಫ್. ಸಿದ್ದನಗೌಡ್ರ, ಗುರು ತಿಗಡಿ, ಗುರು ಪೋಳ, ಶಂಕರಪ್ಪ ಘಟ್ಟಿ, ನಾರಾಯಣ ಭಜಂತ್ರಿ, ಗುರುಮೂತರ್ಿ ಯರಗಂಬಳಿಮಠ, ಶಂಕರ ಗಂಗಣ್ಣವರ, ಶಂಕ್ರಯ್ಯ ಸುಬ್ಬಾಪುರಮಠ, ಎಚ್. ವಿ. ದಳವಾಯಿ, ಎ. ಬಿ. ಚನವಿರಗೌಡರ, ಎಸ್. ಬಿ. ಪಾಟೀಲ್, ಲತಾ ಮುಳ್ಳೂರ, ಅಶೋಕ ಸಜ್ಜನ, ಎಫ್. ವಿ. ಮಂಜಣ್ಣವರ, ಎಂ. ಸಿ. ಸವಣೂರ, ಎಚ್. ಎಸ್. ಬಡಿಗೇರ, ಎಚ್. ಎಂ. ಕುಂದರಗಿ, ಎ. ಎನ್. ಪಾಟೀಲ್, ಎಲ್. ಆಯ್. ಲಕ್ಕಮನವರ, ಬಸವರಾಜ ದೇಸೂರ, ಮಹಾದೇವಿ ದೊಡಮನಿ, ಎಂ. ಎಂ. ಗೊಲ್ಲರ, ಗಂಗವ್ವ ಕೋಟೀಗೌಡರ, ರಂಜನಾ ಪಂಚಾಳ, ಜಿ. ಎಂ. ನದಾಫ್, ಝಕೀರಹುಸೇನ ಸುತಾರ, ಎಂ. ಓ. ಸುಂಕದ, ಶಕುಂತಲಾ ಅರಮನಿ, ರಾಜು ಮಾಳವಾಡ, ಮಾರುತಿ ಭಂಡಿವಡ್ಡರ, ಜಿ.ಐ.ರಾಮಾಪೂರ, ಎಸ್.ಬಿ. ಶಿವಸಿಂಪಿ, ವೈ.ಎಸ್. ಶೆರೆವಾಡ, ಆರ್.ಎಸ್. ಹಿರೇಗೌಡರ, ಸಂಜೀವ ಅಣ್ಣಿಗೇರಿ, ಎ.ಎನ್. ನಾಗರಳ್ಳಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. 

    ಸನ್ಮಾನ : ನಿವೃತ್ತ ಶಿಕ್ಷಕ ಸಿ.ಎಂ. ಕಿತ್ತೂರ ಅವರೊಂದಿಗೆ ಅವರ ಮಾತೋಶ್ರೀ ಈರಮ್ಮ ಹಾಗೂ ಪತ್ನಿ ಮಹಾದೇವಿ ಅವರನ್ನೂ ಸಹ ಸಮಾರಂಭದ ನೆನಪಿನಲ್ಲಿ ಮೈಸೂರು ಪೇಟ, ಶಾಲು, ಫಲಪುಷ್ಪ ನೀಡಿ ತಾಲೂಕಿನ ಶಿಕ್ಷಕರ ಸಮೂಹ ಸನ್ಮಾನಿಸಿ ಅಭಿನಂದಿಸಿತು